ದಿನಕ್ಕೊಂದು ಕಥೆ
ಜರಿ ತೊರೆ ಹಳ್ಳ ಕೊಳ್ಳಗಳನ್ನ ತನ್ನಲ್ಲಿ ಒಟ್ಟುಗೂಡಿಸಿಕೊಂಡು ಸಮೃದ್ಧಿಯಿಂದ ತಾ ನಡೆದದ್ದೇ ದಾರಿ ಎಂದು ಹರಿಯುವುದೆ ನದಿ….. ಹಲವಾರು ನಾಗರಿಕತೆಗಳು ಹುಟ್ಟಲು ನಾಂದಿಯಾಡಿದ್ದೆ ಈ ನದಿಗಳು ಹಾಗೆ ಆ ನಾಗರಿಕತೆಗಳ ಕಣ್ಣೀರಿನ ನದಿಗಳಾಗಿ ಹರಿದು ಅವುಗಳ ಉಳಿವನ್ನೇ ಅಳಿಸಿ ಹಾಕಿದುದು ಉಂಟು.. ಇದಲ್ಲವನ್ನ ನಾವು ಕೇಳಿ ತಿಳ್ಕೊಂಡಿರತೆವೆ.
ನದಿಗಳನ್ನು ನಾವು ಎರಡು ಭಾಗಗಳಲ್ಲಿ ವಿಂಗಡಿಸುತ್ತೇವೆ
೧) ಪೂರ್ವಾಭಿಮುಖವಾಗಿ ಹರಿಯುವ ನದಿಗಳು
೨) ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳು
ಪೂರ್ವಭಿಮುಖವಾಗಿ ಹರಿಯುವ ಪ್ರಮುಖವಾದ ನದಿಗಳೆಂದರೆ ಕಾವೇರಿ ಮತ್ತು ಕೃಷ್ಣಾ
ಕಾವೇರಿ ನದಿಯ ಕುರಿತು
ಕವಿಗಳ ಕಾದಂಬರಿಕಾರರ ಭಾವನಾಲಹರಿಯ ವಿಜೃಂಭಣೆಯ ಸೆಳೆತಕ್ಕೆ ಸಿಕ್ಕು ವಿಜೃಂಭಿಸಿದವಳು ಕಾವೇರಿ, ತನ್ನ ಪವಿತ್ರತೆ,ವ್ಯಾಪಕತೆ,ರಮಣೀಯತೆ, ಕೃಷಿ ಮತ್ತು ವಿದ್ಯುಚ್ಛಕ್ತಿಗೆ ತಾನು ನೀಡಿದ ಕೊಡುಗೆಯಿಂದ ಕರುನಾಡಿನ ದಕ್ಷಿಣ ಗಂಗೆ, ಜೀವನದಿ, ಜೀವನಾಡಿ ಎಂದೇ ಖ್ಯಾತಿಯಾದವಳು…
ಈ ನದಿಯು ಸಮುದ್ರ ಮಟ್ಟದಿಂದ 1341ಮೀ ಎತ್ತರದಲ್ಲಿರುವ ಕರುನಾಡಿನ ಕೊಡಗು ಜಿಲ್ಲೆಯ ಬ್ರಹ್ಮಗಿರಿ ಬೆಟ್ಟದ ತಲಕಾವೇರಿ (ಭಾಗಮಂಡಲ) ಯಲ್ಲಿ ಉಗಮಿಸಿ ಪೂರ್ವಾಭಿಮುಖವಾಗಿ 805 ಕಿ.ಮೀ ಉದ್ದದೊಂದಿಗೆ ಕರುನಾಡು ಮತ್ತು ತಮಿಳುನಾಡು ಮತ್ತು ಪಾಂಡಿಚೇರಿಯಲ್ಲಿ ಹರಿದು ಕಾವೇರಿಪಟ್ಟಣಂ ಬಳಿ ಬಂಗಾಳಕೊಲ್ಲಿಯನ್ನ ಸೇರುತ್ತದೆ….
ನಮ್ಮ ಕರುನಾಡಿನಲ್ಲಿ ಕೊಡಗು, ಹಾಸನ,ಮೈಸೂರು,ಮಂಡ್ಯ ,ರಾಮನಗರ ಜಿಲ್ಲೆಗಳಲ್ಲಿ ೩೨೦ ಕಿ.ಮೀ.(೬೪ ಕಿ.ಮೀ.ಗಡಿ ಸೇರಿದರೆ ೩೮೪ ಕಿ.ಮೀ)ಹರಿಯುತ್ತದೆ..
ಮಂಡ್ಯ ಜಿಲ್ಲೆಯ ಶಿವನಸಮುದ್ರದಲ್ಲಿ ಏಷ್ಯಾದ ಮೊಟ್ಟ ಮೊದಲ ಜಲ ವಿದ್ಯುತ್ ಕೇಂದ್ರವನ್ನು ೧೯೦೨ ರಲ್ಲಿ ಸ್ಥಾಪನೆ ಮಾಡಲಾಗುತ್ತದೆ.
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಕನ್ನಂಬಾಡಿ ಬಳಿ ಕಾವೇರಿ ನದಿಗೆ ಕೃಷ್ಣರಾಜಸಾಗರ ಜಲಾಶಯ ವನ್ನು 1931ರಲ್ಲಿ ನಿರ್ಮಿಸಲಾಗುತ್ತದೆ..
ಹಾಗೆಯೇ ಶಿವನಸಮುದ್ರದ ಬಳಿ ಗಗನಚುಕ್ಕಿ ಮತ್ತು ಭರಚುಕ್ಕಿ ಎಂಬ ಎರಡು ಜಲಪಾತಗಳನ್ನು ಸೃಷ್ಟಿಸಿ ಹಾಗೆಯೇ ಚುಂಚನಕಟ್ಟೆ ಮತ್ತು ಹೊಗೇನಕಲ್ ಜಲಪಾತವನ್ನು ಸಹ ಸೃಷ್ಟಿಸುತ್ತದೆ.
ನಂತರ ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಮೇಕೆದಾಟು(ಒಂದು ಮೇಕೆ ಯು ಸಹ ದಾಟಿ ಹೋಗಬಹುದಾದಂತ ಅತಿ ಚಿಕ್ಕ ಕಂದರ) ಕಂದರದ ಮೂಲಕ ತಮಿಳುನಾಡನ್ನು ಪ್ರವೇಶಿಸುತ್ತದೆ ಇಲ್ಲಿ ಅರ್ಕಾವತಿ ನದಿ ಬಂದು ಸೇರುತ್ತದೆ….
ಕಾವೇರಿ ನದಿಯ ಉಪನದಿಗಳು ಅಂದರೆ ಹೇಮಾವತಿ, ಲಕ್ಷ್ಮಣತೀರ್ಥ, ಹಾರಂಗಿ ,ಕಬಿನಿ ಸುವರ್ಣಾವತಿ, ಅರ್ಕಾವತಿ ಲೋಕಪಾವನಿ ….
“ಗೆಲುವು ನಿಮ್ಮ ಜನ್ಮಸಿದ್ಧ ಹಕ್ಕಾಗಲಿ ಪ್ರಯತ್ನ ಸತತವಾಗಿರಲಿ”
ಮತ್ತೊಂದಷ್ಟು ಮಾಹಿತಿಯೊಂದಿಗೆ ನಾಳೆ ಸಿಗೋಣ ನಾ ಕೌರವ….


