Posts

ದಿನಕ್ಕೊಂದು ಕಥೆ

Image
ಶುಭೋದಯ ಬಂಧುಗಳೇ….. ಜರಿ ತೊರೆ ಹಳ್ಳ ಕೊಳ್ಳಗಳನ್ನ ತನ್ನಲ್ಲಿ ಒಟ್ಟುಗೂಡಿಸಿಕೊಂಡು ಸಮೃದ್ಧಿಯಿಂದ ತಾ ನಡೆದದ್ದೇ ದಾರಿ ಎಂದು ಹರಿಯುವುದೆ ನದಿ….. ಹಲವಾರು ನಾಗರಿಕತೆಗಳು ಹುಟ್ಟಲು ನಾಂದಿಯಾಡಿದ್ದೆ ಈ ನದಿಗಳು ಹಾಗೆ ಆ ನಾಗರಿಕತೆಗಳ ಕಣ್ಣೀರಿನ ನದಿಗಳಾಗಿ ಹರಿದು ಅವುಗಳ ಉಳಿವನ್ನೇ ಅಳಿಸಿ ಹಾಕಿದುದು ಉಂಟು.. ಇದಲ್ಲವನ್ನ ನಾವು ಕೇಳಿ ತಿಳ್ಕೊಂಡಿರತೆವೆ. ನದಿಗಳನ್ನು ನಾವು ಎರಡು ಭಾಗಗಳಲ್ಲಿ ವಿಂಗಡಿಸುತ್ತೇವೆ ೧) ಪೂರ್ವಾಭಿಮುಖವಾಗಿ ಹರಿಯುವ ನದಿಗಳು ೨) ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳು ಪೂರ್ವಭಿಮುಖವಾಗಿ ಹರಿಯುವ ಪ್ರಮುಖವಾದ ನದಿಗಳೆಂದರೆ  ಕಾವೇರಿ  ಮತ್ತು  ಕೃಷ್ಣಾ ಕಾವೇರಿ ನದಿಯ ಕುರಿತು ಕವಿಗಳ ಕಾದಂಬರಿಕಾರರ ಭಾವನಾಲಹರಿಯ ವಿಜೃಂಭಣೆಯ ಸೆಳೆತಕ್ಕೆ ಸಿಕ್ಕು ವಿಜೃಂಭಿಸಿದವಳು  ಕಾವೇರಿ , ತನ್ನ ಪವಿತ್ರತೆ,ವ್ಯಾಪಕತೆ,ರಮಣೀಯತೆ, ಕೃಷಿ ಮತ್ತು ವಿದ್ಯುಚ್ಛಕ್ತಿಗೆ ತಾನು ನೀಡಿದ ಕೊಡುಗೆಯಿಂದ ಕರುನಾಡಿನ  ದಕ್ಷಿಣ ಗಂಗೆ ,  ಜೀವನದಿ, ಜೀವನಾಡಿ ಎಂದೇ ಖ್ಯಾತಿಯಾದವಳು… ಈ ನದಿಯು ಸಮುದ್ರ ಮಟ್ಟದಿಂದ 1341ಮೀ ಎತ್ತರದಲ್ಲಿರುವ ಕರುನಾಡಿನ ಕೊಡಗು ಜಿಲ್ಲೆಯ ಬ್ರಹ್ಮಗಿರಿ ಬೆಟ್ಟದ  ತಲಕಾವೇರಿ (ಭಾಗಮಂಡಲ)  ಯಲ್ಲಿ ಉಗಮಿಸಿ ಪೂರ್ವಾಭಿಮುಖವಾಗಿ 805 ಕಿ.ಮೀ ಉದ್ದದೊಂದಿಗೆ ಕರುನಾಡು ಮತ್ತು ತಮಿಳುನಾಡು ಮತ್ತು ಪಾಂಡಿಚೇರಿಯಲ್ಲಿ ಹರಿದು  ಕಾವೇರಿಪಟ್ಟಣಂ  ಬಳಿ ಬಂಗಾಳಕೊಲ್ಲಿಯನ್ನ ಸೇರು...